ಕವನ - ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆನ್‌ವೇರ್, ಕೊಲೆರಾಡೊ, ಯು.ಎಸ್.ಏ.
ವಿಷಯವೇಕೆ ಕವನಕೆ
ಮನದ ಭಾವ ರೂಪಕೆ
ಹೆಪ್ಪುಗಟ್ಟಿ ಕೂತ ನೆನಪು
ಚೆಲುವಿಗಿರುವ ಆ ಒನಪು
ಪ್ರಕೃತಿಯ ಈ ಸೊಬಗು
ನಾಳೆಗಳ ಹೊಸ ಬೆಳಗು
ಕಾಣುತಿರುವ ಹಗಲುಗನಸು
ಕಂಡ ಕನಸು ಆದ ನನಸು
ಆಗದಿರಲು ಬಂದ ಮುನಿಸು
ಜೀವನದ ಈ ಸೊಗಸು
ಎಲ್ಲ ಕುಳಿತು ಎದೆಯಲಿ
ಇಟ್ಟರೊಮ್ಮೆ ಕಚಗುಳಿ
ಕೊಟ್ಟಂತೆಯೆ ಆಹ್ವಾನ
ಬರೆಯಲೊಂದು ಕವನ!
1 comment:
olleya kavana:)
Post a Comment