ಈಗಿನ ಜೀವನಾನ ಆರಾಮ್ ಐತಿ..ಮುಂದಿಂದು ಇನ್ನೂ ಕಠಿಣ ಇರಬಹುದು.. !
“ಈಗಿನ ಜೀವನ ಆರಾಮ್ ಐತಿ..ಮುಂದಿನ ಜೀವನ ಕಠಿಣ ಇರಬಹುದು”ಅಂತ ನಾ ಹೆಂಗ ನನ್ನ attitude ಬದಲ ಮಾಡಕೊಂಡೆ ಅಂತ ತಿಳಸಾಕ ಒಂದು ಸಣ್ಣ ಬರಹ.
ಮೊದಲು I-flex Soultions ಸೇರಿದಾಗ ಬೆಂಗಳೂರಿನಲ್ಲಿ ನಾನು ಗ್ಲೋಬಲ್ ಸಪೋರ್ಟ್‌ನಲ್ಲಿ ಸಪೋರ್ಟ್ ಟೀಮ್ ಮೆಂಬರ್ ಅಂತ ಆಗಿದ್ದೆ. ಆಗ ಇಲ್ಲಿ ಕೆಲಸದ ಒತ್ತಡ ಅಷ್ಟೇನೂ ಭಾಳ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಓಕೆ.. ನಾಲ್ಕಾರು ಜನ ಸೀನಿಯರ್ಸ್ ಒಟ್ಟಿಗೆ ಇರತಿದ್ದರು, ನನ್ನ ಕೈಯಾಗ ಎಷ್ಟು ಆಗತ್ತಿತ್ತೊ ಅಷ್ಟು ಮಾಡಿ ಇಲ್ಲಂದ್ರ ಅವ್ರಿಗೆ ಕೇಳೋದು. ಹಿಂಗ ನಡತಿತ್ತು ಜೀವನ.
ಆಮ್ಯಾಲೆ ಬಂತು ನೋಡ್ರಿ first assignment to Jhakartha .. ! ಇಲ್ಲಿ ಮಾತ್ರ ನಾನೊಬ್ಬನೇ 3 sites ನೋಡಿಕೊಳ್ಳಬೇಕಾಗಿತ್ತು. ಹೇಳೋವ್ರು ಕೇಳೋವ್ರು ಅಂತಾ ಯಾರೂ ಇರಲಿಲ್ಲ. ಆದ್ರ ಕೆಲಸ ಸ್ವಲ್ಪ ಒತ್ತಡ ತರುತ್ತಿತ್ತು. ಯಾಕಂದ್ರ ಒಬ್ಬನೆ ಇದ್ದೆ ನೋಡ್ರ್ರಿ. ಏನಾರ ಜಾಸ್ತಿ ಪ್ರಾಬ್ಲಮ್ ಆದ್ರ ಸತ್ತೇನೊ ಬದುಕೇನೋ ಅಂತ ಕೇಳಾಕ್ಕ ಸೈತ ಯಾರೂ ಇರಲಿಲ್ಲ. ಇಂಡಿಯಾಕ್ಕ್ ಫೋನ್ ಮಾಡಿ ಕೇಳಬೇಕಾಗತಿತ್ತು. ಆವಾಗ ನಾ ವಿಚಾರ್ ಮಾಡತಿದ್ದೆ “ಎಲಾ ಇವನ ಇಂಡಿಯಾದಾಗ ಎಷ್ಟೋ ಆರಾಮ್ ಇದ್ದೆ, ಇದ ಒಳ್ಳೇ ಇಲ್ಲಿ ಬಂದ್ ಸಿಕ್ಕ ಹಾಕ್ಕೊಂಡ್ನೆಲ್ಲಾ ಅಂತ”.
ಆಮ್ಯಾಗ ಬಂತು ಮುಂದಿನ ಅಸೈನ್‌ಮೆಂಟ್ ಮಲೇಶಿಯಾಕ್ಕ. ಕಸ್ಟಮರ್ ಮತ್ತ ಸಪೋರ್ಟ್ ಕೆಲಸ almost round the clock ನಡೀತಿತ್ತ. ವೀಕೆಂಡ್ಸ್ ಕೂಡ ಕೆಲಸ ಮಾಡಬೇಕಾಗಿತ್ತು. ಆಮ್ಯಾಲೆ ನಮ್ಮ ಹೊಸ ಪ್ರಾಡಕ್ಟ್ flexcubeಗೆ ಮೈಗ್ರೇಶನ್ ಬ್ಯಾರೇ ಶುರು ಆತು. ಹಿಂಗಾಗಿ ಮೈಗ್ರೇಶನ್ ಮತ್ತು ಸಪೋರ್ಟ್ ಎರಡೂ ನೋಡಕೊಬೇಕಾಗಿತ್ತು. ಕೆಲಸ ಭಾಳ್ ಅನಸ್ತಿತ್ತು. ಆವಾಗ್ ನನಗ ಅನಸಾಕ ಶುರು ಅತು..” ಎಲಾ ಇವನ.. ಝಕಾರ್ತದಾಗ ಎಷ್ಟ್ ಆರಾಮ್ ಇದ್ದೆ, ಇಲ್ಲಿ ಬಂದು ಒಳ್ಳೇ ಸಿಕ್ಕ ಹಾಕ್ಕೊಂಡ್ನೆಲ್ಲಾ ಅಂತ” ಅಂತ.
ಇನ್ನ ನೋಡ್ರಿ.. ಮುಂದಿನ ಅಸೈನ್‌ಮೆಂಟ್ ಆಫ್ರಿಕಾದಾಗ PM ಆಗಿ ಹೋಗು ಅಂದರು. ಈಗಂತೂ ತಲಿ ಒಡಕೊಳ್ಳುದು ಒಂದ ಬಾಕಿ. “ಇದೇನಪಾ ಪೂರ್ತಿ ಜವಾಬ್ದಾರಿ ಬಂದ್ ಬಿಟ್ತಲ್ಲ ಅಂತ.....ಝಕಾರ್ತ, ಮಲೇಶಿಯಾದಾಗ ಎಷ್ಟೋ ಆರಾಮ್ ಇತ್ತು ಇದೊಳ್ಳೆ ಇಲ್ಲಿ ಬಂದ್ ಸಿಕ್ಕ ಹಾಕ್ಕೊಂಡೆ” ಅಂತ ಅಂದುಕೊಂಡೆ.
ಒಂದ ದಿನ ಹೀಂಗ ಕುಂತ ವಿಚಾರ ಮಾಡಿದೆ with flashback...! ಪ್ರತಿ ಹೊಸ ಅಸೈನ್‌ಮೆಂಟ್ ಸಿಕ್ಕಾಗನೂ ಹಿಂದಿನ ಅಸೈನ್‌ಮೆಂಟ್‌ನ ಚಲೊ ಇತ್ತು ಅನ್ನಸತಿತ್ತು. ಹಿಂಗಾದ್ರ ಸ್ವಲ್ಪ ತಡಿ ನಮ್ಮ attitudeನ ಚೇಂಜ್ ಮಾಡಿ ಬಿಡೊಣು ಅಂತ. ಇನ್ನ ಮ್ಯಾಲಿಂದ ಹೆಂಗ ವಿಚಾರ್ ಮಾಡೋದು ಅಂದ್ರ “ಈಗಿನ ಅಸೈನ್‌ಮೆಂಟ್ ಭಾಳ ಚಲೊ ಐತಿ, ಯಾಕಂದ್ರ ಮುಂದಿನ ಅಸೈನ್‌ಮೆಂಟ್ ಇದಕ್ಕಿಂತ ಕಠಿಣ ಇರತೈತಿ” . So ಅವತ್ತಿಂದ ನಾನು ಈ ಹೊಸಾ ಅಸೈನ್‌ಮೆಂಟ್‌ಗಳ ಬಗ್ಗೆ ಟೆನ್ಸನ್ ತುಗೊಳ್ಳುದು ಬಿಟ್ಟೆ. ಅದಕ್ಕ ನಾನು ನಿಮಗಾದರೂ ಹೇಳತೆನಿ.. “Don’t worry , be happy….. enjoy the current assignment..current day.. not the future..!”.

No comments:
Post a Comment