Tuesday, October 31, 2006

ಬಾರ್ ಬಾರ್ ಎಲ್ನೋಡಿ ಬಾರ್

-ಗಿರೀಶ ಪಿ. ಮೆಟಗುಡ್ಡಮಠ,ವಿಜಯನಗರ, ಬೆಂಗಳೂರು.

ನನ್ನ ಪ್ರೀತಿಯ ಹುಡುಗಿ ಚಿತ್ರದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಬಿ. ಜಯಶ್ರೀ ಅವರು ಹಾಡಿರುವ "ಕಾರ್ ಕಾರ್"ಧಾಟಿಯಲ್ಲಿ.

ಪ್ರೀತಿಯಿಂದ "ಸ್ವಾಮಿ" ಎಂದು ಕರೆಯಲ್ಪಡುವ ನಮ್ಮ ಸ್ನೇಹಿತ ಬಿ.ಇ.ಯಿಂದ ಸಹಪಾಠಿ ಗಿರೀಶ, ಕನ್ನಡ ಭಾಷೆ, ನೆಲ, ನುಡಿಗಾಗಿ ಯಾವಾಗಲೂ ಮುಂದು. ಹುಬ್ಬಳ್ಳಿಯಲ್ಲಿ ತನ್ನ ಸಂಪೂರ್ಣ ವಿದ್ಯಾಭ್ಯಾಸ ಮುಗಿಸಿರುವ ಸ್ವಾಮಿಗೆ ಬರವಣಿಗೆಯಲ್ಲಿ ಒಳ್ಳೆಯ ಹಿಡಿತವಿದೆ. ಆದರೆ ಬರೆಯಲು ಏಕೊ ಸಮಯವಿಲ್ಲ..! ಇವರ ವಿಶೇಷ ಅಂದರೆ ಯಾವುದೇ ಒಂದು ವಿಷಯದ ಬಗ್ಗೆ ಇವರಿಗಿರುವ ಇರುವ ಆಳವಾದ ಜ್ಞಾನ ಹಾಗೂ ಅದಕ್ಕೆ ಪೂರಕವಾದ ಅಂಕಿ-ಅಂಶಗಳು ಮತ್ತು ಅದನ್ನು ಬರಹದ ರೂಪದಲ್ಲಿ ಹೊರಹೊಮ್ಮಿಸುವ ಸಾಮರ್ಥ್ಯ.





ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್***

ಬೆಂಗಳೂರ್ ಹುಡುಗಿ :
ಇವಿನಿಂಗ್ ಡ್ರೈವು ಮಾಡಿಕೊಂಡು,
ಪಾರ್ಟಿ ಅಂತ ಹೇಳಿಕೊಂಡು,
ಬಿಜನೆಸ್ ಅಂತ ಗುಂಡು ಹಾಕ್ತಾರೋ...

ಹುಬ್ಬಳ್ಳಿ ಹುಡುಗ :
ನಮ್ಮೂರಲ್ಲಿ ಹಂಗೇನಿಲ್ಲ ಬ್ರಾಂಡಿ,
ರಮ್ಮು, ಜಿನ್ನು, ವಿಸ್ಕಿಏನೇ ಇರಲಿ ಕುಡಕೊಂಡ್ ಹೋಗ್ತಾರೇ....

ಬೆಂಗಳೂರ್ ಹುಡುಗಿ :
ಸೊಷಿಯಲ್ ಸ್ಟೇಟಸ್ ಅಂದುಕೊಂಡು,
ನಾಲ್ಕು ಪಟ್ಟು ದುಡ್ಡು ಕೊಟ್ಟು,ರಾತ್ರಿ ಇಡೀ ಡಾನ್ಸು ಮಾಡ್ತಾರೋ,

ಹುಬ್ಬಳ್ಳಿ ಹುಡುಗ :
ನಮ್ಮೂರಲ್ಲಿ ಹಂಗೇನಿಲ್ಲ ಬಾರಲ್ಲ ಜಾಗ ಸಾಕಾಗೊಲ್ಲ,
ಕೌಂಟರಲ್ಲೇ ಕುಡುದು ಸ್ನ್ಯಾಕ್ಸು ತಿಂತಾರೆ ***೧

ಬೆಂಗಳೂರ್ ಹುಡುಗಿ :
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರಿಂದೆ ಕಾರ್ಬಾರು .. ಬಾರಿಂದೆ ದರ್ಬಾರುಊರಿನ ತುಂಬ ಬರಿಯ ಬಾರಗಳೋ

ಹುಬ್ಬಳ್ಳಿ ಹುಡುಗ :
ನಮ್ಮೂರ ಕಥೆ ಗೊತ್ತಾ?
ಗೋವಾ ಒರಿಜಿನಲ್ ಮಾಲೆ ಇದ್ದರೂ,
ಸರ್ಕಾರದ್ದೇ ಗುಂಡು ಇದ್ದರೂ,ಕಮರಿಪೇಟೆ ಕಂಟ್ರಿ ಕುಡಿದು ಹಾಯಾಗಿರ್ತಾರೆ

ಬೆಂಗಳೂರ್ ಹುಡುಗಿ :
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ
ಬಾರ್ಬಾರಿಗೆ ಹೊಡೆದಾಟ ಬಾರಿಗೆ ಬಡಿದಾಟಬಾರೆ ಇಲ್ಲಿ ದೈವ ಕಾಣಿರೋ

ಹುಬ್ಬಳ್ಳಿ ಹುಡುಗ :
ನಮ್ಮ ಕಡೆ ಏನು ಅಂತಾರೆ ಗೊತ್ತಾ?
ಬಾರಲ್ಲಿ ಕುಡಿದ್ರೆ ತುಟ್ಟಿಯಾಗುತ್ತೆ,
ಓರಿಜಿನಲ್ ಕುಡುದ್ರೆ ನಿಶೆಯಾಗೊಲ್ಲ,
ಲೊಕಲ್ ಡಿ-ಮಾಲ್ ಕುಡುದ್ರೆ ಮಾತ್ರ ನಿದ್ದೆ ಮಾಡ್ತಾರೆ

ಬೆಂಗಳೂರ್ ಹುಡುಗಿ :
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ ಬಾರ್
ಬಾರ್ ಬಾರ್ ಬಾರ್ ಬಾರ್ ಎಲ್ನೋಡಿ
ಬಾರ್ಬಾರೆ ನಿನ್ನ ತಾಯಿ,
ಬಾರೆ ನಿನ್ನ ತಂದೆಬಾರೆ
ಇಲ್ಲಿ ಲೈಫೂ ಕಾಣಿರೋ....

ಹುಬ್ಬಳ್ಳಿ ಹುಡುಗ :
ಬಾರಿಗಿಂತ ಗುಂಡು ಮುಖ್ಯ,
ಗುಂಡಿಗಿಂತ ನಿಶೆಯು ಮುಖ್ಯ ಅನ್ನೊ ನೀತಿ ನಮ್ಮ ಊರಲ್ಲಿ