Wednesday, June 02, 2021

ಮೋದಿಯು ಮಾಡಿದ ಪರಸಂಗ ಐತೆ

ಆರ್ಥಿಕ ಪರಸಂಗದ ಗಂಡೆದೆ ಟೀಮ್

ಐನೂರು ಸಾವಿರದ 'ನೋಟ' ದಾಗೆ ನಗೆಯ ಮೀಟಿ
ಹಣಕಾಸಿನಾಟದ ಮೋಜಿನ ಎಲ್ಲಿಯ ದಾಟಿ
'ಮೋದಿ'ಯು ಮಾಡಿದಾ ಪರಸಂಗಾ ಐತೆ
ಪರಸಂಗಾ ಐತೆ
ಆಹಾ  ಮಡದಿಯ ಮೋಹ ತೊರೆದವವನ ಪರಸಂಗಾ ಐತೆ

ಬಡವರ ಬದುಕಿಗೆ ಹೊಸ ನೆಸರು ಅರಳೈತೆ
ಕೆಲದಿನಾ ಕೈನಲ್ಲಿ ಕಾಸಿಲ್ದೆ ಮೈ ಪರಚುಕೊಳ್ಳವಂಗಾಗೈತೆ
ಸಿರಿವಂತರ ಮನಸ್ನಾಗೆ ಹೆದ್ರಿಕೆ ಹುಟ್ಟೈತೆ
ಅವರ ಮೈಯಾಗೆ ನಡುಕ ಶುರುವಾಗೈತೆ.

ಐನೂರು ಸಾವಿರದ 'ನೋಟ' ದಾಗೆ ನಗೆಯ ಮೀಟಿ
ಹಣಕಾಸಿನಾಟದ ಮೋಜಿನ ಎಲ್ಲಿಯ ದಾಟಿ
'ಮೋದಿ'ಯು ಮಾಡಿದಾ ಪರಸಂಗಾ ಐತೆ
ಪರಸಂಗಾ ಐತೆ
ಆಹಾ  ಮಡದಿಯ ಮೋಹ ತೊರೆದವವನ ಪರಸಂಗಾ ಐತೆ

ಬಂಗಾರದ ಮೇಲೂ ಕಡಿವಾಣ ಬಿದ್ದೋಗ್ಐತೆ.
ನನ್ನೆಂಡ್ತಿ ಅಪರಂಜಿ ಚಿನ್ನದ ಮೋಹ ಕಡಿಮೆಯಾಗೈತೆ
ಹಗಲಾಗೆ ಇರುಳಾಗಿನ ಲೂಟಿ ನಿಂತೋಗೈತೆ.
ಬಿಲ್ಲಿಂಗ್ ಮಶಿನಿದ್ದವರಾ ಮುಖದಾಗೆ ನಗೆಬಿಲ್ಲೆ ಮಿನುಗೈತೆ
ನನ್ನ ಹುಡುಗಿ ತನ್ನ ಬ್ಯಾಂಕ್ ಬ್ಯಾಲನ್ಸ ನೋಡಿ ಬಾಯಿ ಬಡಕೊಂಡೈತೆ.

ಇಡಿ ದೇಸದಾಗೆ ಮೋದಿ ಮಾತಿಗೆ ಒಮ್ಮತದ ಸ್ವರವೈತೆ
ರಿಯಲ್ ಎಸ್ಟೆಟ್ನವರು ಕಪ್ಪು ಹಣ ಗಳಿಸಿದ್ದ ಎಸ್ಟೆಂದು ಗೊತ್ತಾಗೋಗೈತೆ
ಅವರ ಮುಖವೀಗ ಬದನೆಕಾಯಿ ತರಾ ಬಿಳಿಚಿಕೊಂಡೈತೆ
ನನ ರಾಣಿ ನಿಜ ರೂಪಾಯಿ ರಂಗಾನೆ ಬದಲಾಯತಲ್ಲೆ

ಐನೂರು ಸಾವಿರದ 'ನೋಟ' ದಾಗೆ ನಗೆಯ ಮೀಟಿ
ಹಣಕಾಸಿನಾಟದ ಮೋಜಿನ ಎಲ್ಲಿಯ ದಾಟಿ
'ಮೋದಿ'ಯು ಮಾಡಿದಾ ಪರಸಂಗಾ ಐತೆ
ಪರಸಂಗಾ ಐತೆ
ಆಹಾ  ಮಡದಿಯ ಮೋಹ ತೊರೆದವವನ ಪರಸಂಗಾ ಐತೆ

ಸ್ಪೂರ್ತಿ: ಪರಸಂಗದ ಗೆಂಡೆತಿಮ್ಮ ಚಿತ್ರದ ಹಾಡು (ನೊಟದಾಗೆ ನಗೆಯ ಮೀಟಿ)
ದಿನಾಂಕ:11/12/2016
ಬರೆದವರು: ಬಸವರಾಜ ಯಾದವಾಡ
http://ehotthige.blogspot.in

Art work by Sphurti J Bilgi...

 Art work by Sphurti J Bilgi... D/o our friend Jagannath S Bigi, Bangalore